ಮಂಗಳ ಗೌರಿ ವ್ರತ ವಿಧಿ-ವಿಧಾನ
- ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದೇಳಿ. ಅದರ ನಂತರ ಸ್ನಾನ ಮಾಡಿ ಮತ್ತು ಶುದ್ಧವಾದ ಬಟ್ಟೆಗಳನ್ನು ಧರಿಸಿ.
- ಈಗ ಒಂದು ಸ್ವಚ್ಛವಾದ ಮಣೆಯ ಮೇಲೆ ಕೆಂಪು ಬಟ್ಟೆಯನ್ನು ಹರಡಿ.
- ಅದರ ಮೇಲೆ ಗೌರಿಯ ಪ್ರತಿಮೆ ಅಥವಾ ಅರಿಶಿನದಿಂದ ತಯಾರಿಸಿದ ಮೂರ್ತಿಯನ್ನು ಇಡಿ.
- ಅಕ್ಕಿಯ ತಟ್ಟೆಯಲ್ಲಿ ಕಳಶ ಇಟ್ಟು, ಕಳಶಕ್ಕೆ ಮಾವಿನ ಎಲೆ ಅಥವಾ ವೀಳ್ಯದೆಲೆ ಇಡಿ.
- ತಾಯಿಯ ಮುಂದೆ ಉಪವಾಸದ ನಿರ್ಣಯವನ್ನು ಮಾಡಿ ಮತ್ತು ಹಿಟ್ಟಿನಿಂದ ಮಾಡಿದ ದೀಪವನ್ನು ಬೆಳಗಿಸಿ.
- ಇದರ ನಂತರ, ಧೂಪ, ನೈವೇದ್ಯ, ಹಣ್ಣುಗಳು ಮತ್ತು ಹೂವುಗಳು ಇತ್ಯಾದಿಗಳಿಂದ ಗೌರಿ ದೇವಿಯನ್ನು ಷೋಡಶೋಪಚಾರ ಪೂಜೆಯೊಂದಿಗೆ ಪೂಜಿಸಿ.
- ಪೂಜೆ ಮುಗಿದ ನಂತರ ಗೌರಿಯ ಆರತಿಯನ್ನು ಮಾಡಿ ಮತ್ತು ಅವಳನ್ನು ಪ್ರಾರ್ಥಿಸಿ.
- ಶಿವ ಮತ್ತು ಪಾರ್ವತಿಯ ಅಷ್ಠೋತ್ತರ ಹೇಳಿ.
- ವ್ರತದ ದಿನ ಒಪ್ಪೊತ್ತಿನ ಅಥವಾ ಒಂದು ಹೊತ್ತು ಮಾತ್ರ ಆಹಾರ ಸೇವಿಸಿ, ಇಡೀ ದಿನ ಪಾರ್ವತಿ ದೇವಿಯನ್ನು ಪೂಜಿಸಬೇಕು.
- ದೇವಿಗೆ ಮೊಸರನ್ನ ಶ್ರೇಷ್ಠ, ಅದನ್ನು ಅರ್ಪಿಸಿ.
- ಮುತ್ತೈದೆಯರಿಗೆ ನವಧಾನ್ಯ, ಹಣ್ಣು, ಹೂವು, ತೆಂಗಿನಕಾಯಿ, ಅರಿಶಿನ ಕುಂಕುಮ ಸಹಿತ ಬಾಗಿನ ಮತ್ತು ತಂಬೂಲ ನೀಡಿ.
ಮಂಗಳ ಗೌರಿ ವ್ರತದ ಮಹತ್ವ
- ಮಂಗಳ ಗೌರಿ ವ್ರತದ ಸಮಯದಲ್ಲಿ ಗೌರಿಯನ್ನು ಪೂಜಿಸುವುದರಿಂದ ದೇವತೆಯ ಅಶೀರ್ವಾದಕ್ಕೆ ಪಾತ್ರರಾಗುತ್ತೇವೆ.
- ಅದೃಷ್ಟದ ಆಶೀರ್ವಾದ ಸಿಗುತ್ತದೆ ಮತ್ತು ವೈವಾಹಿಕ ಜೀವನದಲ್ಲಿ ಅಪಾರ ಪ್ರೀತಿ ಉಳಿಯುತ್ತದೆ.
- ಈ ದಿನ ಉಪವಾಸ ಮಾಡುವ ಮೂಲಕ ನಿಮ್ಮ ವೈವಾಹಿಕ ಜೀವನದಲ್ಲಿ ಹಾಗೂ ಇಡೀ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.
- ಪತಿಯು ದೀರ್ಘಾಯುಷ್ಯದ ಆಶೀರ್ವಾದವನ್ನು ಪಡೆಯುತ್ತಾರೆ.
- ಮಕ್ಕಳನ್ನು ಬಯಸುವ ಮಹಿಳೆಯರಿಗೆ ಈ ಉಪವಾಸವು ತುಂಬಾ ಮಂಗಳಕರವಾಗಿದೆ.
- ಯಾರೊಬ್ಬರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ, ಅವರು ಮಂಗಳ ಗೌರಿಯನ್ನು ಉಪವಾಸ ಮಾಡಬೇಕು.
- ಈ ವ್ರತದಿಂದ ವೈಷಮ್ಯ ಮತ್ತು ವೈವಾಹಿಕ ಜೀವನದ ಎಲ್ಲಾ ಇತರ ಸಮಸ್ಯೆಗಳನ್ನು ತೆಗೆದುಹಾಕಲಾಗುತ್ತದೆ. ಈ ಉಪವಾಸವನ್ನು ಪೂರ್ಣ ಶ್ರದ್ಧಾ ಭಕ್ತಿಯಿಂದ ಮಾಡಬೇಕು.
ಮಂಗಳ ಗೌರಿ ವ್ರತದ ಕಥೆ
ದಂತಕಥೆಯ ಪ್ರಕಾರ, ಒಂದು ಕಾಲದಲ್ಲಿ ಒಂದು ಊರಿನಲ್ಲಿ ಧರಂಪಾಲ್ ಎಂಬ ವ್ಯಾಪಾರಿ ವಾಸಿಸುತ್ತಿದ್ದ. ಅವನ ಹೆಂಡತಿ ತುಂಬಾ ಸುಂದರವಾಗಿದ್ದಳು ಮತ್ತು ಅವರಿಗೆ ಸಂಪತ್ತಿನ ಕೊರತೆಯಿರಲಿಲ್ಲ, ಆದರೆ ಮಕ್ಕಳಿಲ್ಲದ ಕಾರಣ ತುಂಬಾ ದುಃಖಿತರಾಗಿದ್ದರು. ಸ್ವಲ್ಪ ಸಮಯದ ನಂತರ, ದೇವರ ಅನುಗ್ರಹದಿಂದ ಅವನಿಗೆ ಮಗ ರತ್ನ ಸಿಕ್ಕಿತು, ಆದರೆ ಅವನು ಅಲ್ಪಕಾಲಿಕವಾಗಿದ್ದನು. ಆದ್ಧರಿಂದ ಧರಂಪಾಲ್ ತನ್ನ ಮಗನಿಗೆ 16ನೇ ವಯಸ್ಸಿಗೆ ಬರುವ ಮೊದಲೇ ವಿವಾಹ ಮಾಡಿದ್ದನು,ಸೊಸೆಯು ಮದುವೆಯ ನಂತರ ಮಂಗಳ ಗೌರಿವ್ರತ, ಉಪವಾಸ ಆಚರಿಸುತ್ತಿದ್ದರು. ಧರಂಪಾಲ್ ಮಗನಿಗೆ 16ನೇ ವಯಸ್ಸಿನಲ್ಲಿ ಹಾವಿನ ಕಡಿತದಿಂದ ಸಾಯುವಂಥ ಪರಿಸ್ಥಿತಿ ಎದುರಾಯಿತು.
ಗೌರಿಯ ಈ ಉಪವಾಸದ ಪರಿಣಾಮದಿಂದಾಗಿ ಅವಳು ಎಂದಿಗೂ ವಿಧವೆಯಾಗಲು ಸಾಧ್ಯವಿಲ್ಲ ಎಂದು ಆಶೀರ್ವದಿಸಲ್ಪಟ್ಟಳು.ಆಕೆ ಮಾಡಿದ ಮಂಗಳ ಗೌರಿ ವ್ರತ ಹಾಗೂ ವರದಿಂದಧರಂಪಾಲ್ ಮಗನಿಗೆ ಸೌಭಾಗ್ಯ ಸಿಕ್ಕಿತು ಮತ್ತು ಆತನ ಮಗ ಅಂದರೆ ಮಂಗಳಗೌರಿ ಪತಿಗೆ 100 ವರ್ಷಗಳ ದೀರ್ಘಾಯುಷ್ಯ ಸಿಕ್ಕಿತು ಎಂದು ಹೇಳಲಾಗಿದೆ. ಅಂದಿನಿಂದ ಎಲ್ಲರುಮಂಗಳ ಗೌರಿ ವ್ರತ ಮಾಡಲು ಆರಂಭಿಸಿದರು ಎನ್ನಲಾಗುತ್ತದೆ.
ಈ ಉಪವಾಸವನ್ನು ಆಚರಿಸುವ ಮೂಲಕ, ಮಹಿಳೆಯರು ಅದೃಷ್ಟವನ್ನು ಪಡೆಯುವುದು ಮಾತ್ರವಲ್ಲ, ಪ್ರೀತಿ ಯಾವಾಗಲೂ ವೈವಾಹಿಕ ಜೀವನದಲ್ಲಿ ಉಳಿಯುತ್ತದೆ ಎಂದು ನಂಬಲಾಗಿದೆ.