ಬೃಹಸ್ಪತಿ ವಾರ (ಗುರುವಾರ) ವ್ರತ ಕಥಾ PDF ಕನ್ನಡ
Download PDF of Guruvar Laxmi Vrat Katha Kannada
Shri Vishnu ✦ Vrat Katha (व्रत कथा संग्रह) ✦ ಕನ್ನಡ
ಬೃಹಸ್ಪತಿ ವಾರ (ಗುರುವಾರ) ವ್ರತ ಕಥಾ ಕನ್ನಡ Lyrics
|| ಮಾರ್ಗಶಿರ ಲಕ್ಷ್ಮಿ ವ್ರತ ಪೂಜಾ ಮತ್ತು ಕಥೆ ಸಹಿತ ||
ಇದು ಪ್ರಾಚೀನ ಕಾಲದ ವಿಷಯ. ದೊಡ್ಡ ಭವ್ಯ ಮತ್ತು ದಾನಶೀಲ ರಾಜನು ಒಂದು ರಾಜ್ಯವನ್ನು ಆಳುತ್ತಿದ್ದನು. ಪ್ರತಿ ಗುರುವಾರದಂದು ಉಪವಾಸವಿದ್ದು ದೀನದಲಿತರಿಗೆ ಸಹಾಯ ಮಾಡುತ್ತಾ ಪುಣ್ಯವನ್ನು ಪಡೆಯುತ್ತಿದ್ದನು, ಆದರೆ ಈ ವಿಷಯ ಅವನ ರಾಣಿಗೆ ಇಷ್ಟವಾಗಲಿಲ್ಲ. ಅವಳು ಉಪವಾಸ ಮಾಡಲಿಲ್ಲ ಅಥವಾ ರಾಜನಿಗೆ ದಾನ ಮಾಡಲು ಅವಕಾಶವನ್ನೂ ನೀಡಲಿಲ್ಲ. ಒಮ್ಮೆ ರಾಜ ಬೇಟೆಗೆ ಹೋಗಿದ್ದನು. ಆ ದಿನ, ಗುರು ಬೃಹಸ್ಪತಿ ದೇವನು ಸನ್ಯಾಸಿ ರೂಪದಲ್ಲಿ ಭಿಕ್ಷೆ ಬೇಡಲು ಬಂದರು. ಸನ್ಯಾಸಿಯು ರಾಣಿಯಿಂದ ಭಿಕ್ಷೆಯನ್ನು ಕೇಳಿದಾಗ, ಅವಳು ಸಾಧುವನ್ನು ಕುರಿತು, ಓ ಸಾಧು ಮಹಾರಾಜ, ನಾನು ಈ ದಾನ ಮತ್ತು ಪುಣ್ಯದಿಂದ ಬೇಸತ್ತಿದ್ದೇನೆ. ಇದರಿಂದ ನನ್ನಲ್ಲಿನ ಹಣವೆಲ್ಲಾ ನಾಶವಾಗುತ್ತಿದೆ. ಇದಕ್ಕೆ ಯಾವುದಾದರೂ ಪರಿಹಾರವನ್ನು ಸೂಚಿಸಿ ಎಂದು ಕೇಳಿಕೊಳ್ಳುತ್ತಾಳೆ.
ಬೃಹಸ್ಪತಿದೇವನು ರಾಣಿಗೆ ಆ ಹಣವನ್ನು ಪುಣ್ಯ ಕಾರ್ಯಗಳಿಗೆ ಉಪಯೋಗಿಸುವಂತೆ ಹೇಳಿದನು. ಆದರೆ ರಾಣಿಯು ಸನ್ಯಾಸಿಯ ಮಾತಿನಿಂದ ಸಂತೋಷಪಡಲಿಲ್ಲ. ನಾನು ದಾನ ನೀಡುತ್ತೇನೆ ಮತ್ತು ಅದರ ನಿರ್ವಹಣೆಯಲ್ಲಿ ನನ್ನ ಸಮಯ ವ್ಯರ್ಥವಾಗುತ್ತದೆ ಅಂತಹ ಹಣ ನನಗೆ ಅಗತ್ಯವಿಲ್ಲ, ಇದರಿಂದ ಎಲ್ಲಾ ಹಣವು ನಾಶವಾಗುತ್ತದೆ ಎಂದು ಹೇಳಿದಳು. ಆಗ ಬೃಹಸ್ಪತಿದೇವನು ಅಲ್ಲಿಂದ ಕಣ್ಮರೆಯಾದನು.
ಸನ್ಯಾಸಿಯು ಆಕೆಗೆ ಸಲಹೆಯನ್ನು ನೀಡಿ ಮೂರು ಗುರುವಾರಗಳು ಕಳೆಯುವುದರೊಳಗೆ ಆಕೆಯಲ್ಲಿನ ಎಲ್ಲಾ ಸಂಪತ್ತು ನಾಶವಾಯಿತು. ರಾಜನ ಕುಟುಂಬವು ಆಹಾರಕ್ಕಾಗಿ ಪರದಾಡ ತೊಡಗಿತು. ರಾಜನು ಹಣ ಸಂಪಾದಿಸಲು ಬೇರೆ ದೇಶದಲ್ಲಿ ಮರ ಮಾರಲು ಪ್ರಾರಂಭಿಸಿದನು. ಅವನ ಅಕ್ಕ ರಾಣಿಯ ಈ ಸ್ಥಿತಿಯ ಬಗ್ಗೆ ತಿಳಿದಾಗ ಅವಳು ಅವರನ್ನು ಭೇಟಿಯಾಗಲು ಬಂದಳು. ರಾಣಿ ತನ್ನ ನೋವನ್ನು ತನ್ನ ಸಹೋದರಿಯ ಬಳಿ ಹೇಳಿಕೊಂಡಳು. ರಾಣಿಯ ಸಹೋದರಿ ರಾಣಿಯನ್ನು ಕುರಿತು, ಭಗವಾನ್ ಬೃಹಸ್ಪತಿದೇವನು ಎಲ್ಲರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಹಾಗೂ ಇದರಿಂದ ನಿಮ್ಮ ಮನೆಯಲ್ಲಿನ ಹಣದ ಸಮಸ್ಯೆಯೂ ದೂರಾಗಿ ಸಂಪತ್ತು ಹೆಚ್ಚಾಗಬಹುದು ಎಂದು ಹೇಳುತ್ತಾಳೆ.
ಮೊದಲಿಗೆ ರಾಣಿ ನಂಬಲಿಲ್ಲ, ನಂತರ ತನ್ನ ಸಹೋದರಿಯ ಬಳಿ ಇರುವ ಸಿರಿ, ಸಂಪತ್ತನ್ನು ಕಂಡು ಅವಳು ಕೂಡ ವ್ರತವನ್ನು ಮಾಡಲು ಮುಂದಾದಳು. ರಾಣಿ ತನ್ನ ತಂಗಿಗೆ ಗುರುವಾರದಂದು ಉಪವಾಸ ಮಾಡುವ ಬಯಕೆಯನ್ನು ಹೇಳಿಕೊಂಡಳು. ತಂಗಿಯು ಪೂಜೆಯ ವಿಧಾನದಿಂದ ಹಿಡಿದು ಉಪವಾಸದ ಸಮಯದಲ್ಲಿ ಏನು ತಿನ್ನಬೇಕು..? ಏನು ತಿನ್ನಬಾರದು..? ಎಂದು ಎಲ್ಲವನ್ನೂ ಹೇಳಿದಳು.
ರಾಣಿಯು ತನ್ನ ಸಹೋದರಿ ಹೇಳಿದಂತೆಯೇ ಉಪವಾಸ ಮಾಡಿದಳು, ಆದರೆ ಅವಳು ಹಳದಿ ಆಹಾರದ ಬಗ್ಗೆ ಚಿಂತೆ ಮಾಡುತ್ತಿದ್ದಳು, ಆ ದಿನ ಬೃಹಸ್ಪತಿ ದೇವನು ಸಾಮಾನ್ಯ ವ್ಯಕ್ತಿಯ ರೂಪವನ್ನು ತೆಗೆದುಕೊಂಡು ಸೇವಕಿಗೆ ಎರಡು ತಟ್ಟೆಗಳಲ್ಲಿ ಹಳದಿ ಆಹಾರವನ್ನು ನೀಡಿದನು. ಹೀಗೆ ಪ್ರತಿ ಗುರುವಾರದಂದು ಉಪವಾಸ ಮಾಡುವುದರಿಂದ ರಾಣಿಯು ಮತ್ತೆ ಸಂಪತ್ತು ಮತ್ತು ಆಸ್ತಿಯನ್ನು ಪಡೆದಳು, ತಂಗಿಯ ಆಜ್ಞೆಯಂತೆ ರಾಣಿಯೂ ದಾನ ಮಾಡಲು ಪ್ರಾರಂಭಿಸಿದಳು, ಇದರಿಂದಾಗಿ ಇಡೀ ನಗರದಲ್ಲಿ ಅವಳ ಖ್ಯಾತಿಯು ಹೆಚ್ಚಾಗತೊಡಗಿತು. ಮತ್ತು ಜೀವನವು ಸಂತೋಷದಿಂದ ತುಂಬಿಕೊಂಡಿತು.
ಗುರುವಾರದಂದು ನಾವು ಈ ಮೇಲಿನ ವ್ರತ ಕಥೆಯನ್ನು ಓದುವುದರಿಂದ ಅಥವಾ ಕೇಳುವುದರಿಂದ ಗುರು ಬೃಹಸ್ಪತಿಯ ವಿಶೇಷ ಅನುಗ್ರಹವನ್ನು ಪಡೆದುಕೊಳ್ಳಬಹುದು. ಗುರು ಬೃಹಸ್ಪತಿಯ ಅನುಗ್ರಹವು ನಮಗೆ ಸಂಪತ್ತು, ಹಣ ಮತ್ತು ಸಂತೋಷದ ಜೀವನವನ್ನು ನಡೆಸಲು ಸಹಕರಿಸುತ್ತದೆ.
Join HinduNidhi WhatsApp Channel
Stay updated with the latest Hindu Text, updates, and exclusive content. Join our WhatsApp channel now!
Join Nowಬೃಹಸ್ಪತಿ ವಾರ (ಗುರುವಾರ) ವ್ರತ ಕಥಾ
READ
ಬೃಹಸ್ಪತಿ ವಾರ (ಗುರುವಾರ) ವ್ರತ ಕಥಾ
on HinduNidhi Android App
DOWNLOAD ONCE, READ ANYTIME
